ಅಮೃತಾತ್ಮರೇ ನಮಸ್ಕಾರ,
02.12.2020
ಆಸ್ಪತ್ರೆ ರಹಿತ ಆರೋಗ್ಯಕ್ಕೆ ಆಯುರ್ವೇದ
ಸಂಚಿಕೆ-337
••••••••••••••••
335, 336, 337, 338ನೇ ಸಂಚಿಕೆಗಳು ಬಹು ಮುಖ್ಯವಾದವುಗಳು, ಏಕೆಂದರೆ ಇಲ್ಲಿ ಎಲ್ಲಾ ರೋಗಗಳ ಮೂಲ ವಿಷುವನ್ನು ಚರ್ಚಿಸಲಾಗಿದೆ.
✍️: ಇಂದಿನ ವಿಷಯ:
ಸರ್ವ ರೋಗದ ಮೂಲ “ಐಟೀಸ್”
(ಭಾಗ-3)
•••••••••••••••••••••••••••••••••••••••••••••
ಆಧುನಿಕ ದಿನಮಾನದ ಊತವನ್ನು , ಅದರ ಕಾರಣವನ್ನು , ತಡೆಯುವಿಕೆಯನ್ನು ಮತ್ತು ಚಿಕಿತ್ಸಾ ವಿಧಿವಿಧಾನವನ್ನಿಂದು ನೋಡೋಣ👇
♠ ♠ಊತ/ಐಟೀಸ್ ಎಂದರೇನು?
ಈ ಶರೀರದ ಬೆಳವಣಿಗೆಗೆ ಬೇಡವಾದ ಆಹಾರಪದಾರ್ಥಗಳು ( ರಾಸಾಯನಿಕಗಳ ರೂಪದಲ್ಲಿ ) ಜೀವಕೋಶಗಳ ಒಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ, ಅವು ಅದರ ಹಾನಿಯಿಂದ ತಪ್ಪಿಸಿಕೊಳ್ಳಲು ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಿಗಿಯಾಗಿ ಊದಿಕೊಳ್ಳುವ ಪ್ರಕ್ರಿಯೆಯೇ ಊತ ಅಥವಾ ಐಟಿಸ್ಐ
♠ ♠ಐಟೀಸ್ ಗೆ ಕಾರಣವೇನು?
ಆಯುರ್ವೇದದಲ್ಲಿ “ಓಕ ಸಾತ್ಮ್ಯ” ಅಥವಾ “ಆಹಾರ ಸಾತ್ಮ್ಯ” ಎಂಬ ಸಿದ್ಧಾಂತವು ಮಾನವನ ಆರೋಗ್ಯದಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.
“ಸಾತ್ಮ್ಯ” ಎಂದರೆ ( ಸ+ಆತ್ಮ )ಯಾವ ಆಹಾರವು ಅದುವರೆಗೂ ಜಡ ಅಥವಾ ನಿರ್ಜೀವ ಎನಿಸಿಕೊಂಡಿದೆಯೋ ಅದು ಸಚೇತನವಾಗುವ ಅಂದರೆ, ನಮ್ಮ ಜೀವಕೋಶವೇ ಆಗಿ ಬದಲಾವಣೆ ಹೊಂದುವ ಅದ್ಭುತ ಆಂತರಿಕ ಪ್ರಕೃತಿಗೆ ಸರಿಹೊಂದುವ ಯಾವಪದಾರ್ಥವಿದೆಯೋ ಅದನ್ನು “ಸಾತ್ಮ್ಯ ಆಹಾರ” ಎಂದು ಕರೆಯುತ್ತಾರೆ.
ಒಂದೊಮ್ಮೆ ನಮ್ಮ ಜೀವಕೋಶವು ಸೇವಿಸಿದ ಆಹಾರವನ್ನು ಆತ್ಮಗತವಾಗಿಸಿಕೊಳ್ಳದೇ ಹೋದಲ್ಲಿ ಅದನ್ನು ‘ಅಸಾತ್ಮ್ಯ ಆಹಾರ’ ಎಂದು ಕರೆಯುತ್ತಾರೆ.
ಆತ್ಮೀಯರೇ,
ಇಂದಿನ ಐಟೀಸ್ ಗೆ ಕಾರಣವೇ ಈ “ಅಸಾತ್ಮ್ಯ ಆಹಾರ”
♠ ♠ ನಾವು ಎಡವುತ್ತಿರುವುದೆಲ್ಲಿ?
ಮೊಳಕೆಕಾಳಿನಲ್ಲಿ ಹೆಚ್ಚು ಪ್ರೊಟೀನ್ ಇದೆ , ಇಂತಿಂತ ಹಣ್ಣುಗಳಲ್ಲಿ ಇಂತಿಂತ ವಿಟಮಿನ್, ಮಿನರಲ್ ಗಳಿವೆ ಎಂಬ ಲೆಕ್ಕಾಚಾರದಲ್ಲಿ ಅವುಗಳನ್ನು ಶರೀರದ ಆಂತರಿಕ ಪ್ರಕೃತಿಯನ್ನು ಗಮನಿಸದೇ ಸೇವಿಸುತ್ತಿದ್ದೇವೆ. ಇದೇ, ಎಲ್ಲಾ ಐಟಿಸ್ ಗಳ ಮೂಲಕಾರಣವಾಗಿದೆ
♠ ♠ ಐಟೀಸ್ ನ ಮುಂದಿನ ಹಂತ:
ಯಾವುದೇ ಜೀವಕೋಶವು ಊದಿಕೊಂಡಾಗ ಆ ಕ್ಷಣದಲ್ಲಿ ಬಲವಾನ್ ಆಗಿ ಕಂಡರೂ ಆಹಾರ, ಗಾಳಿ, ನೀರು ಸಿಗದೇ ಕೆಲಕಾಲದಲ್ಲೇ ದುರ್ಬಲವಾಗುತ್ತವೆ. ಇಂತಹ, ದುರ್ಬಲಗೊಂಡ ಜೀವಕೋಶಗಳ ಒಳಗೆ ತಂತಾನೇ ಉದ್ಭವಿಸುವ ಸೂಕ್ಷ್ಮ ಜೀವಿಗಳು (ಸ್ವೇದಜ ಕ್ರಿಮಿ) ನಮಗೆ tonsillitis, conjunctivitis, colitis , hepatitis, cellulitis ಮುಂತಾದವುಗಳನ್ನು ಉಂಟುಮಾಡುತ್ತವೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಮಾನವನು, ಕ್ರಿಮಿಗಳೆಲ್ಲಾ ನಮ್ಮ ಶತ್ರುಗಳು ಹೊರಗಿನಿಂದ ಬಂದ foreign body ಗಳು ಎಂದು ಅವುಗಳನ್ನು ಕೊಲ್ಲಲು ತನ್ನ ದೇಹದೊಳಗೆ ಕ್ರಿಮಿನಾಶಕಗಳನ್ನು (ಆಂಟಿಬಯೋಟಿಕ್ಸ್) ಸುರಿದುಕೊಳ್ಳುತ್ತಿದ್ದಾನೆ.
ತತ್ಪರಿಣಾಮ ಆ ಕ್ರಿಮಿಗಳೇನೋ ಸತ್ತಂತೆ ಕಂಡರೂ ಅದರೊಟ್ಟಿಗೆ ನಮ್ಮ ಜೀವಕೋಶಗಳು ಮರಳಿ ಸರಿಪಡಿಸಲಾಗದ ರೀತಿಯಲ್ಲಿ ತಮ್ಮ ಸ್ವಭಾವವನ್ನು ಬದಲಿ ಮಾಡಿಕೊಳ್ಳುವತ್ತ ದಾಪುಗಾಲಿಡುತ್ತವೆ. ಪದೇ ಪದೇ ಇದೇ ಪ್ರಕ್ರಿಯೆ ನಡೆದಲ್ಲಿ ಅಪಾಯಕಾರಿ ಕ್ಯಾನ್ಸರ್ ನಂತಹ ದೊಡ್ಡ ಊತಕ್ಕೆ ಗುರಿಯಾಗಬೇಕಾಗುತ್ತದೆ.
ಐಟಿಸ್ ಒಂದು ಸಾಮಾನ್ಯ ಊತ. ಅದು ಮತ್ತೆ ಮತ್ತೆ ಶರೀರದೊಳಗೆ ಉಂಟಾಗುತ್ತಿದ್ದರೆ ಶಾಶ್ವತ ಊತ ಉತ್ಪತ್ತಿಯಾಗುತ್ತದೆ. ಅದನ್ನೇ, ಕ್ಯಾನ್ಸರ್ ಎಂದು ಕರೆಯುತ್ತೇವೆ. ಹಾಗಾಗಿ, ಈ ಐಟಿಸ್ ಎಂಬ ರೋಗದ ಮೂಲವನ್ನು ಬೆಳೆಯಲು ಬಿಡುವುದು ಸರಿಯೇ?!!!
❄️ ಐಟೀಸ್ ತಡೆಯುವ ಪ್ರಕ್ರಿಯೆಯನ್ನು ನಾಳೆ ನೋಡೋಣ…..
ಧನ್ಯವಾದಗಳು.
•••••••••••••••••••••••••••••••••••••••
♠ ಸರ್ವದಾ ಸ್ವಾಸ್ಥ್ಯ ನಿಮ್ಮದಾಗಲಿ
♠ ♠ ಸ್ವಾಸ್ಥ್ಯ ಸರ್ವರದ್ದೂ ಆಗಲಿ
••••••••••••••••••••••••••••••••••••••••
ಸಂಪರ್ಕಕ್ಕೆ:
8792290274
9148702645
ಧನ್ಯವಾದಗಳು
••••••••••••••••••••••••••••••••••••••••••
ಕೆಳಗಿನ ಲಿಂಕ್ ಬಳಸಿ “ಆಸ್ಪತ್ರೆ ರಹಿತ ಜೀವನ” ಗುಂಪಿಗೆ ಸೇರಿದರೆ ಲೇಖನಗಳನ್ನು ನೀವು ಪ್ರತಿ ದಿನವೂ ಪಡೆಯಬಹುದು ಮತ್ತು ನಿಮ್ಮ ಆಪ್ತ ಬಳಗವನ್ನು ನೀವೇ ನೇರವಾಗಿ ಗುಂಪಿಗೆ ಸೇರಿಸಬಹುದು.
https://t.me/joinchat/Pzj2OBdb9refGJ5DbP1CSw
ವಿಶ್ವಹೃದಯಾಶೀರ್ವಾದವಂ ಬಯಸಿ
ಡಾ.ಮಲ್ಲಿಕಾರ್ಜುನ ಡಂಬಳ
ಅಥರ್ವ ಆಯುರ್ವೇದ ಸಂಶೋಧನಾ ಸಂಸ್ಥೆ