ಜನಸಾಮಾನ್ಯರಲ್ಲಿ ಕೊರೋನ ಎಷ್ಟರಮಟ್ಟಿಗೆ ಹೆಸರನ್ನು ಮಾಡಿತ್ತೋ,ಅದಕ್ಕೆ ಸಮಸಮವಾಗಿ ಖ್ಯಾತಿಯನ್ನು ಪಡೆಯುತ್ತಿರುವುದು ಆಯುರ್ವೇದಿಯ ಕಷಾಯಗಳು.
ಹಿಂದೆ, ಆಹಾರ ಜೀರ್ಣವಾಗಲೆಂದು ಬಿಸಿ ಬಿಸಿ ಕಷಾಯಗಳನ್ನು ಸೇವಿಸುತ್ತಿದ್ದ ಕಾಲ ಒಂದಿತ್ತು.
ನಿಧಾನವಾಗಿ ಅದು ಅನಾರೋಗ್ಯಕರವಾಗಿ ಮತ್ತು ದುಷ್ಟ ಹವ್ಯಾಸದ ರೀತಿಯಲ್ಲಿ ಬದಲಾಗಿ ಉತ್ತೇಜಕ ರಾಸಾಯನಕಗಳನ್ನೊಳಗೊಂಡ ಚಹಾ ಅಥವಾ ಕಾಫಿ ಕಡೆಗೆ ತಿರುಗಿತು. ಇದರಿಂದ ಜನರು ಅಪಾರ ಶಕ್ತಿಯನ್ನು ಕಳೆದುಕೊಂಡರೂ,ಅದರಲ್ಲಿನ ಉತ್ತೇಜಕ ರಾಸಾಯನಕಗಳ ಪ್ರಭಾವಕ್ಕೊಳಗಾಗಿ ತಮಗಾಗುವ ದುರ್ಬಲತೆಯನ್ನು ಯಾವುದೋ ಒಂದು ಖಾಯಿಲೆಗೆ ಆರೋಪಿಸಿತ್ತಿದ್ದರು ಹಾಗೂ ಚಹಾ ಕಾಫಿಗಳನ್ನು ಹೀರಿ ಶಕ್ತಿ ಬಂದಿತು ಎಂದು ಮತ್ತೆ ಮತ್ತೆ ಸೇವಿಸಿ ದೀರ್ಘಕಾಲದ ರೋಗಗಳನ್ನು ಬಳುವಳಿಯಾಗಿ ಪಡೆಯುತ್ತಿದ್ದರು.
ಮನುಷ್ಯನ ಎಲ್ಲಾ ಅನಗತ್ಯಗಳನ್ನು ದೂರ ಮಾಡಿ ಅಗತ್ಯಗಳನ್ನು ಉತ್ತೇಜಿಸುವಂತೆ ಮಾಡಿದ ಕೊರೋನವೂ, ಜನರನ್ನು ಈ ಅನಗತ್ಯ ಪಾನೀಯಗಳಿಂದಲೂ ದೂರ ಮಾಡಿ ಅತ್ಯಗತ್ಯ ಕಷಾಯಗಳತ್ತ ಮುಖ ಮಾಡುವಂತೆ ಮಾಡಿದ್ದು ಸಾಮಾಜಿಕ ಸ್ವಾಸ್ಥ್ಯದಲ್ಲಿ ಬಹುದೊಡ್ಡ ಬದಲಾವಣೆಯಾಗಿದೆ.
*
ಕಷಾಯಗಳ ಪ್ರಸ್ತುತತೆ:
ಜಗತ್ತಿನಲ್ಲಿ ಇರಬಹುದಾದ ಸಾವಿರಾರು ಔಷಧಿಗಳಿಗೆ ಬಗ್ಗದ ಕೊರೋನ, ಕಷಾಯದ ಮುಂದೆ ಮಣಿಯುತ್ತಿರುವುದುದನ್ನು ಮನಗಂಡ ಜನಸಾಮಾನ್ಯರು ನೆಗಡಿ ಮುಂತಾದ ಅನಾರೋಗ್ಯದ ಅವಸ್ಥೆಯಲ್ಲಿ ಮಾತ್ರ ಸೇವಿಸುತ್ತಿದ್ದ ಶುಂಠಿ ,ಮೆಣಸಿನ ಕಷಾಯಗಳನ್ನು ನಿತ್ಯವೂ ಸೇವಿಸುತ್ತಾ ಅದರ ಅಗತ್ಯವನ್ನು ಮನಗಂಡಿದ್ದಾರೆ.
ಕಷಾಯಗಳ ವೈಜ್ಞಾನಿಕ ಹಿನ್ನಲೆ:
ಆಯುರ್ವೇದ ಆಚಾರ್ಯರು ಅನಗತ್ಯ ಎನಿಸುವ ಮತ್ತು ಕೇವಲ ಔಪಚಾರಿಕವಾಗಿ ಬಳಸುವ ಯಾವ ಆಹಾರಪ್ರಾಕರಗಳನ್ನಾಗಲಿ, ಔಷದಗಳನ್ನಾಗಲಿ ತಿಳಿಸದೇ ವೈಜ್ಞಾನಿಕ ದೃಷ್ಟಿಯಿಂದ ಸೂಕ್ಷ್ಮವಾಗಿ ಅವಲೋಕಿಸಿ ಮನುಷ್ಯನ ದೇಹದ ಮೇಲೆ ಅದರಿಂದಾಗುವ ಸತ್ಪರಿಣಾಮಗಳನ್ನು ಮನಗಂಡು ಲಕ್ಷಕ್ಕಿಂತಲೂ ಹೆಚ್ಚು ಪ್ರಕಾರದ ದ್ರವ್ಯಗಳ ಸಂಯೋಗಗಳನ್ನು ಯೋಜಿಸಿ ಮನುಷ್ಯನ ಆರೋಗ್ಯವನ್ನು ಸ್ಥಿರವಾಗಿ ಇರಿಸಿದ್ದಾರೆ. ಕಷಾಯ ದ್ರವ್ಯಗಳಲ್ಲಿನ ಔಷಧೀಯ ಶಕ್ತಿಯು ನೆಗಡಿ ಮುಂತಾದ ರೋಗಗಳನ್ನುಂಟು ಮಾಡುವ ಯಾವುದೇ ವೈರಾಣುಗಳನ್ನು ಪ್ರವೇಶದ ಹಂತದಲ್ಲಿಯೇ ಅಂದರೆ, ಗಂಟಲಿನಲ್ಲಿರುವಾಗಲೇ ಅದಕ್ಕೆ ಉಳಿದುಕೊಳ್ಳಲು,ತನ್ನ ಸಂತತಿಯನ್ನು ವೃದ್ಧಿಸಲು ಬೇಕಾಗುವ ಸೂಕ್ತ ವಾತಾವರಣವನ್ನು(suitable media for the growth of infective organisms)ಇಲ್ಲದಂತೆ ಮಾಡಿಬಿಡುತ್ತವೆ.
ಇಂತಹ ಅತ್ಯಂತ ಸರಳ ವಿಧಾನವನ್ನು ಬಳಸಿದರೆ ಸೋಂಕು ತಗುಲುವ ಸಾಧ್ಯತೆ ಇರುವ ಶೇಕಡಾ 95 ಜನರನ್ನು ಸೋಂಕು ಮುಟ್ಟಲಾರದು. ಉಳಿದಂತೆ ಕೆಲವೇ ಕೆಲವು ವ್ಯಾಧಿಕ್ಷಮತ್ವ ಕ್ಷೀಣವಾಗಿರುವ ಜನರನ್ನು ಸೋಂಕು ತಗುಲಿದರೂ ಕಷಾಯದಿಂದ ಅವರ ವ್ಯಾಧಿಕ್ಷಮತ್ವ ವೃದ್ಧಿಯಾಗಿ ಯಾವುದೇ ಅಪಾಯವಿಲ್ಲದೇ ಗುಣಮುಖರಾಗುತ್ತಾರೆ.
*
ಇದನ್ನು ಮನಗಂಡ ಜನರು ತಾವಾಗಿಯೇ ಸ್ವಇಚ್ಛೆಯಿಂದ ಕಷಾಯಗಳನ್ನು ಸೇವಿಸುತ್ತಿರುದರಿಂದ “ಆಯುರ್ವೇದ ಕಷಾಯಗಳು ಸೋಂಕಿಗೆ ಪ್ರಭಲ ಅಸ್ತ್ರವಾಗಿ ಹೊರಹೊಮ್ಮುತ್ತಿವೆ.
ಧನ್ಯವಾದಗಳು